ಕ್ಯಾಫೀನ್

ಪ್ರಪಂಚದ ಎಲ್ಲೆಡೆಗಳಲ್ಲೂ ಪಾನೀಯವಾಗಿ ಉಪಯೋಗಿಸುವ ಕಾಫಿ, ಚಹ, ಕೋಕೋ ಮುಂತಾದುವುಗಳ ಸಸ್ಯಗಳಲ್ಲಿ ಇರುವ ಒಂದು ಆಲ್ಕಲಾಯ್ಡ್. ಇದರ ಪರಿಣಾಮವಾಗಿ ಈ ಪಾನೀಯಗಳು ಮನುಷ್ಯನಿಗೆ ಉಲ್ಲಾಸದಾಯಕವಾಗಿವೆ. ಎಫ್. ರಂಜ್ ಎಂಬಾತ 1820ರಲ್ಲಿ ಪ್ರಥಮವಾಗಿ ಕ್ಯಾಫೀನನ್ನು ಪ್ರತ್ಯೇಕೀಕರಿಸಿದ. ಆ ತರುವಾಯ ಅದನ್ನು ಬೇರೆ ಬೇರೆ ಕ್ರಮಗಳಿಂದ ಸಂಶ್ಲೇಷಿಸಲಾಗಿದೆ. ಕ್ಯಾಫೀನನ ರಾಸಾಯನಿಕ ವಿನ್ಯಾಸವನ್ನು ಇಲ್ಲಿ ತೋರಿಸಿದೆ. ಅಣುಸೂತ್ರ  ಅ8ಊ10ಓ4ಔ2.

ಚಿತ್ರ-1

ಆಕರ: ಚಹದ ಎಲೆಗಳಲ್ಲಿ ಕಾಫಿಯ ಬೀಜಗಳಲ್ಲಿ ಮತ್ತು ಕೋಲಾ ಕಾಯಿಗಳಲ್ಲಿ ಕ್ಯಾಫೀನ್ ದೊರೆಯುವುದು. ಒಂದು ಲೋಟ ಚಾಹ ಅಥವಾ ಕಾಫಿಯಲ್ಲಿ 100-150 ಮಿಲಿಗ್ರಾಂನಷ್ಟು ಕ್ಯಾಫೀನ್ ಇರುತ್ತದೆ. 

ಕೆಟ್ಟುಹೋದ ಅಥವಾ ಹಾಳಾದ ಚಾ ಎಲೆಗಳನ್ನು ಚೆನ್ನಾಗಿ ಪುಡಿಮಾಡಿ ನೀರಿನಲ್ಲಿ ಕುದಿಸಿ ಸೋಸುವುದರಿಂದ ಬರುವ ದ್ರಾವಣದಲ್ಲಿ ಕ್ಯಾಫೀನ್, ಪ್ರೋಟೀನುಗಳು ಮತ್ತು ಟ್ಯಾನಿನುಗಳು ಇರುತ್ತವೆ. ಈ ದ್ರಾವಣವನ್ನು ಕ್ಷಾರಯುಕ್ತ ಲೆಡ್ ಅಸಿಟೇಟಿನೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಪಡಿಸುವುದರಿಂದ ಪ್ರೋಟಿನುಗಳು ಮತ್ತು ಟ್ಯಾನಿನುಗಳು ಘನರೂಪದಲ್ಲಿ ಬೇರ್ಪಡುತ್ತವೆ. ಇವನ್ನು ಸೋಸಿ ಪ್ರತ್ಯೇಕಿಸಲಾಗಿ ಬರುವ ದ್ರಾವಣವನ್ನು ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದ ಜೊತೆಗೆ ಕೂಡಿಸುವುದರಿಂದ ಲೆಡ್‍ಸಲ್ಫೇಟ್ (PbSಔ4) ಘನಪದಾರ್ಥ ಕೆಳಗೆ ಇಳಿಯುತ್ತದೆ. ಇದನ್ನು ಬೇರ್ಪಡಿಸಿದ ತರುವಾಯ ಉಳಿಯುವ ದ್ರಾವಣದಲ್ಲಿ ಕ್ಯಾಫೀನ್ ಇರುತ್ತದೆ.  ಈ ಕ್ಯಾಫೀನ್ ಯುಕ್ತ ದ್ರಾವಣವನ್ನು ಎಲುಬಿನ ಹುಡಿಯಿಂದ ವರ್ಣರಹಿತಗೊಳಿಸಿ 3-4 ಸಲ ಕ್ಲೋರೋಫಾರ್ಮಿನೊಂದಿಗೆ ಸರಿಯಾಗಿ ಮಿಶ್ರಣ ಮಾಡುವುದರಿಂದ ಕ್ಯಾಫೀನ್ ಕ್ಲೋರೋಫಾರ್ಮಿನಲ್ಲಿ ಕರಗುತ್ತದೆ. ಕ್ಯಾಫೀನ್‍ಯುಕ್ತ ಕ್ಲೋರೋಫಾರ್ಮ್ ದ್ರಾವಣವನ್ನು ಬಟ್ಟಿ ಇಳಿಸುವುದರಿಂದ ಕ್ಲೋರೋಫಾರ್ಮ್ ಬಟ್ಟೀಕರಣವಾಗಿ ಉಳಿಯುವ ಘನಪದಾರ್ಥವೇ ಕ್ಯಾಫೀನ್. ಈ ಘನಪದಾರ್ಥವನ್ನು ಬಿಸಿನೀರಿನಲ್ಲಿ ಸ್ಫಟಿಕೀಕರಿಸಲಾಗಿ ಒಂದು ಅಣು ನೀರು ಇರುವ ಸೂಜಿಯಂಥ ಆಕಾರವುಳ್ಳ ಮೃದುವಾದ ಕ್ಯಾಫೀನ್ ಸ್ಫಟಿಕಗಳು ಹೊರಬೀಳುತ್ತವೆ.

ಗುಣಗಳು:  ಕ್ಯಾಫೀನಿನ ರುಚಿ ಕಹಿ. ಇದು ತಣ್ಣೀರಿನಲ್ಲಿ ಮತ್ತು ಆಲ್ಕೋಹಾಲಿನಲ್ಲಿ ಹೆಚ್ಚು ಕರಗುವುದಿಲ್ಲ. ಕ್ಯಾಫೀನಿನ ಕರಗುವ ಬಿಂದು 2350 ಸೆಂ. ಇದಕ್ಕಿಂತ ಹೆಚ್ಚಿನ ಉಷ್ಣತೆಗೆ ಒಳಪಡಿಸಿದಾಗ ಕ್ಯಾಫೀನ್ ಉತ್ಪತನಗೊಳ್ಳುತ್ತದೆ. ಇದು ಸಾರರಿಕ್ತ ಕ್ಷಾರ.  ಸಾರಆಮ್ಲಗಳ ಸಂಯೋಗದಲ್ಲಿ ಇದು ಲವಣಗಳನ್ನು ಕೊಡುತ್ತದೆ.  ಸಾರ ಹೈಡ್ರೊಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಕ್ಯಾಫೀನ್ ಹೈಡ್ರೊಕ್ಲೋರೈಡ್ ಎಂಬ ಲವಣ ಸಿಕ್ಕುತ್ತದೆ, ಅ8ಊ10ಓ4ಔ2. ಊಅಟ. ಈ ಲವಣವನ್ನು ನೀರಿನಲ್ಲಿ ಉದಜ ವಿಶ್ಲೇಷಣೆಗೆ ಒಳಪಡಿಸುವುದರಿಂದ ಕ್ಯಾಫೀನ್ ಮರಳಿ ಸಿಕ್ಕುತ್ತದೆ.  ಕ್ಯಾಫೀನನ್ನು ಕ್ಲೋರಿನ್ ಕರಗಿದ ನೀರಿನಲ್ಲಿ ಉತ್ಕರ್ಷಣೆ ಮಾಡುವುದರಿಂದ ಸಿಕ್ಕುವ ಸಂಯುಕ್ತಗಳು ಡೈಮೀಥೈಲ್ ಅಲ್ಲಾಕ್ಸನ್ ಮತ್ತು ಮೋನೋಮೀಥೈಲ್ ಯೂರಿಯ. ಕ್ಯಾಫೀನನ್ನು ಪ್ರಬಲವಾದ ಉತ್ಕರ್ಷಣಕ್ಕೊಳಪಡಿಸುವುದರಿಂದ ಡೈಮೀಥೈಲ್ ಆಕ್ಸಮೈಡ್ ಎಂಬ ಸಂಯುಕ್ತ ಸಿಕ್ಕುತ್ತದೆ. ಕ್ಯಾಫೀನನ್ನು ನಿಷ್ಕ್ರಿಯಮಾಧ್ಯಮದಲ್ಲಿ ಕ್ಲೋರಿನಿನೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಪಡಿಸುವುದರಿಂದ ಮಾನೋಕ್ಲೋರೋ ಕ್ಯಾಫೀನ್ ಸಿಕ್ಕುತ್ತದೆ.  ಇದನ್ನು ಆಲ್ಕೊಹಾಲ್ ಯುಕ್ತ ಏಔಊನ ಸಂಗಡ ರಾಸಾಯನಿಕ ಕ್ರಿಯೆಗೆ ಒಳಪಡಿಸಿ ಬಂದ ಸಂಯುಕ್ತವನ್ನು ಊಅಟ  ಆಮ್ಲದ ಜೊತೆಗೆ ಬಿಸಿಮಾಡುವುದರಿಂದ ಹೈಡ್ರಾಕ್ಸಿ ಕ್ಯಾಫೀನ್ ಎಂಬ ಸಂಯುಕ್ತ ಸಿಕ್ಕುತ್ತದೆ.  ಇದು 1: 3 : 7 ಟ್ರೈಮೀಥೈಲ್ ಯೂರಿಕ್ ಆಮ್ಲವನ್ನು ಹೋಲುತ್ತದೆ.
   
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
                                                          		 (ಎಲ್.ಡಿ.ಎಂ.)